ನಿಮ್ಮ ಸಿರಿ ಸಂಪತ್ತಿನ ಒಟ್ಟು ಬೆಲೆ ಎಷ್ಟು?
ಒಮ್ಮೆ ಒಂದಾನೊಂದು ಕಾಲದಲ್ಲಿ ಒಬ್ಬ ಸೂಫಿ ಸಂತರಿಗೆ ಮಹಾರಾಜರೊಬ್ಬರು “ನಿಮ್ಮ ಆಸ್ತಿ – ಸಿರಿ – ಸಂಪತ್ತಿನ ಒಟ್ಟು ಬೆಲೆ ಎಷ್ಟಾಗಬಹುದು” ಎಂದು ಕೇಳಿದರು.
ನಮ್ಮ ನಿಮ್ಮೆಲ್ಲರ ಹಾಗೆಯೇ ಸಂತರಿಗೂ ಈ ಪ್ರಶ್ನೆ ಕೇಳಿ ಬಹಳ ಮುಜುಗರವಾಯಿತು. ಮಹಾರಾಜರ ರಾಜ್ಯ ವಿಶಾಲವಾಗಿದ್ದು ಅವರ ಎಣಿಕೆಗೆ ಮೀರಿದ ಅಪಾರವಾದ ಸಿರಿ ಸಂಪತ್ತು ಇದ್ದವು. ಈ ಸಂಪತ್ತಿನ ಬಗ್ಗೆ ಮಹಾರಾಜರಿಗೆ ಬಹಳ ಗರ್ವವಿತ್ತು. ಸಂತರಿಗೆ ಮಹಾರಾಜರ ಬಗ್ಗೆ ಬಹಳ ಗೌರವವಿದ್ದುದರಿಂಧ ಪ್ರಶ್ನೆಗೆ ತಾಳ್ಮೆಯಿಂದ ಹಿಂಗೆ ಉತ್ತರಿಸಿದರು:
“ಅದರ ಬೆಳೆ ಇಷ್ಟೇ ಅಂಥ ಹೇಳುವುದಕ್ಕೆ ಸಮಯ ಬೇಕಾಗುವುದು. ಅಂದ ಹಾಗೆ, ನೀವು ಈ ಪ್ರಶ್ನೆ ಏಕೆ ಕೆಳುಥಿರುವಿರಿ? ಏಕೆಂದು ಹೇಳುವದಕ್ಕೆ ಮುಂಚೆ ನನ್ನ ಮತ್ತೊಂದು ಪ್ರಶ್ನೆಯನ್ನು ಕೇಳಿರಿ” ಎಂದು ಸಂತರು ಮಹಾರಾಜರನ್ನು ಕೇಳಿದರು
“ನೀವು ಒಂದು ಮಟ ಮಟ ಮಧ್ಯಾನ ಒಂದು ಮರುಭೂಮಿಯಲ್ಲಿ ನಡೆದು ಹೋಗುಥಿದ್ದಿರೆಂದು ಭಾವಿಸಿಕೊಳ್ಳಿ. ಅದು ಮರುಭೂಮಿ, ಕುಡಿಯಲು ಎಲ್ಲೂ ಒಂದು ತೊಟ್ಟೂ ನೀರು ಸಿಗುಥಿಲ್ಲ. ಆದರೆ ನಿಮಗೆ ಬಹಳ ಬಾಯಾರಿಕೆಯಾಗುಥಿದೆ. ಇನ್ನೊಂದು ಘಳಿಗೆಯಲ್ಲಿ ನೀರು ಸಿಗದಿದ್ದರೆ ನಿಮ್ಮ ಪ್ರಾಣವೇ ಹೊರತು ಹೊಗುಥದೆ ಎನ್ನುವಷ್ಟು ಬಾಯಾರಿಕೆ. ಆ ಸಮಯದಲ್ಲಿ ಯಾರಾದರು ಬಂದು ಒಂದು ಲೋಟ ನೀರು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ನೀವೇನು ಕೊಡುಥೀರಿ?” ಎಂದು ಸಂತರು ಮಹಾರಾಜರನ್ನು ಕೇಳಿದರು.
ಅದಕ್ಕೆ ಮಹಾರಾಜರು “ನನ್ನ ಅರ್ಧ ರಾಜ್ಯವನ್ನು ಕೊಟ್ಟು ಬಿಡುತ್ಹಿನಿ” ಎಂದರು.
ಸಂತರು ಮತ್ತೆ “ಮಹಾರಾಜರೇ, ನಿಮ್ಮನ್ನು ದೇವರು ಚಿರಕಾಲ ಆರೋಗ್ಯವಾಗಿ ಇಟ್ಟರಲಿ. ಆದರೆ ಒಂದು ಕ್ಷಣ ಇದನ್ನು ಕಲ್ಪಿಸಿಕೊಳ್ಳಿ. ನಿಮ್ಮ ಆರೋಗ್ಯ ತೀರ ಹದಗೆಟ್ಟಿದೆ ಎಂದುಕೊಳ್ಳಿ. ವೈದ್ಯರು ಎಲ್ಲ ಬಗೆಯ ಔಷದೊಪಚಾರಗಳನ್ನು ಮಾಡಿದ್ದರೆ. ಆದರೆ ನಿಮ್ಮ ಆರೋಗ್ಯ ಸುಧಾರಿಸುಥಿಲ್ಲ. ನಿಮ್ಮ ಅಂತ್ಯಕಾಲ ಸಮೀಪಿಸುಥಿದೆ ಎನಿಸುತಿದೆ. ಆಗ ಯಾರೋ ಒಬ್ಬರು ಒಂದು ಗುಳಿಗೆಯನ್ನು ಕೊಡುತ್ಹಾರೆ. ನೀವು ಸಂಪೂರ್ಣವಾಗಿ ಗುಣಮುಖರಗುಥ್ಥಿರಿ. ಸಾವಿನಿಂದ ಪಾರಗುಥ್ಥೀರಿ. ಆಗ ಆ ಗುಳಿಗೆಗೆ ಪ್ರತಿಯಾಗಿ ನೀವೇನು ಕೊಡುತ್ತೀರಿ?”
ಮಹಾರಾಜರು ತಕ್ಷಣ “ನನ್ನ ಉಳಿದರ್ಧ ರಾಜ್ಯವನ್ನೂ ಕೊಟ್ಟು ಬಿಡುಥ್ಥಿನಿ” ಎಂದರು.
ಸ್ವಲ್ಪ ಹೊತ್ತು ಸುಮ್ಮನೆ ನಿಂತ ಸಂತರು “ಹಾಗಾದರೆ ನಿಮ್ಮ ಇಡೀ ರಾಜ್ಯ, ಸಿರಿ, ಸಂಪತ್ತುಗಳ ಬೆಲೆ ಕೇವಲ ಒಂದು ಲೋಟ ನೀರು ಮತ್ತು ಒಂದು ಗುಳಿಗೆ ಮಾತ್ರ ಎಂದಂತಾಯಿತು. ಹಾಗಿದ್ದರೆ ಇಷ್ಟಕ್ಕೆ ನೀವು ಅಷ್ಟೇಕೆ ಗರ್ವ ಪಡುತ್ತೀರಿ?”
ಈ ಮಾತುಗಳನ್ನು ಕೆಳುಥಿದ್ದಂಥೆಯೇ ಮಹಾರಾಜರ ಮೇಲೆ ಮಂಜಿನ ಮಳೆ ಸುರಿದಂಥಾಯಿತು. ಸಂತರ ಮಾತಿನ ಅಂತರಾಳ ಅವರಿಗೆ ಅರ್ಥವಾಯಿತು. ಅಂದಿನಿಂದ ಅವರು ತಮ್ಮ ಸಿರಿ ಸಂಪತ್ತುಗಳ ಬಗ್ಗೆ ಅಹಂಕಾರ ಪಡುವುದನ್ನು ಬಿಟ್ಟುಬಿಟ್ಟರು.
The above story in English is as follows:
Once upon a time, a wealthy king who used to take pride about his wealth asks a sufi saint: “what would be the total value of your assets and wealth?”.
Just the way anyone of us would get uncomfortable when this question is asked to any of us, even the saint was perplexed. The king was very proud of his vast kingdom and innumerable assets. However, the saint had a lot of respect in the king and chose to answer the king politely.
The saint asks the King: “To give a value to my assets would take some time. By the way, why are you asking this question? And before you answer me, Please answer this question”
The saint asks the King: “Imagine that you are walking in a desert on one hot afternoon. That is a desert, and you cannot find even a single drop of water to drink. You are very very thirsty. You feel you will die if you don’t get water for another moment. At that time, someone would give you a glass of water. What would you be giving to that person in return of that glass of water?”
The King immediately answers: “I will give him/her half of my kingdom”
The saint then asks again: “Oh King! May God give you a very long life with good health forever. But imagine this for a second. You have fallen ill. Your health is diminishing by the second. All the doctors have tried various medicines and nothing has helped. You feel you are approaching death. At that time, some stranger comes in there and gives you a tablet. You recover miraculously after consuming that tablet. You survive your near death experience. What would you give to that stranger in return of that tablet?”
The King immediately answers: “I will give him/her the remaining half of my kingdom”
After a moment’s of silence, the saint says: “So, you mean to say that your entire kingdom’s worth is just a glass of water and a tablet. For this worth, why are you so proud?”
The king feels that a bucket of icewater has been poured upon him. He understands the depth of the saint’s words. He then returns home a wise person and rules his kingdom for a long time being a humble king.


This blog runs on WordPress, isn’t it? How did you manage to write in kannada (hope I guessed the language right!) here? Once I wrote in hindi in my blog but the text didn’t show up correctly. What can be the problem? Is there a special plugin to do the job?
Well, use google transliteration to the core.. And your system too should have the font installed even if you use google transliteration. only then would you be able to view the blog post properly.